“ನೀವು ತಪ್ಪದೇ ಬರಬೇಕು..”
“ಮರೆಯದೇ ನಮ್ಮ ಕಚೇರಿಗೆ ಬರಲೇಬೇಕು”.. – ಹೀಗೊಂದು ಆಹ್ವಾನ.
ಅತ್ತ ಕಡೆಯಿಂದ.. “ಖಂಡಿತ ಬರ್ತೇವೆ. ಅಷ್ಟೇ ಏಕೆ..’ಗ್ಯಾರಂಟಿ’ ಬರ್ತೇವೆ” – ಎಂಬ ಉತ್ತರ.
ಇದು ಹಲವು ಮಾಧ್ಯಮ ಕಚೇರಿಗಳಲ್ಲಿ ಇತ್ತೀಚೆಗೆ ನಡೆದ ಚುಟುಕು ಸಂಭಾಷಣೆ. ವಿಷಯ ಇಷ್ಟೇ. ಹೊಸ ಸುದ್ದಿ ವಾಹಿನಿ ಆರಂಭವಾಗಿದೆ. ಹೆಸರು “ಗ್ಯಾರಂಟಿ ನ್ಯೂಸ್”.
ಕಳೆದ ಕೆಲವು ವರ್ಷಗಳ ಚುನಾವಣಾ ರಾಜಕಾರಣ “ಗ್ಯಾರಂಟಿ” ಎಂಬ ಪದವನ್ನು ಹೆಚ್ಚು ಚಾಲ್ತಿಗೆ ತಂದಿದೆ. ಗ್ಯಾರಂಟಿ ಸ್ಕೀಮ್ ಗಳನ್ನು ಒಪ್ಪುವವರು, ಬೇಡ ಎನ್ನುವವರು..ಹೀಗೆ ಎಲ್ಲರೂ ಈ ಬಗ್ಗೆ ಮಾತನಾಡಿದ್ದಾರೆ…ಇಲ್ಲ ಬರೆದಿದ್ದಾರೆ. ಆ ಕಾರಣಕ್ಕೆ ಈ ಪದ ತುಂಬಾ ಕ್ಯಾಚಿ ಎನ್ನಿಸಿ ಈಗ ಸುದ್ದಿವಾಹಿನಿಯ ಹೆಸರಾಗಿದೆ.
ನ್ಯೂಸ್ ಪ್ರೆಸೆಂಟರ್ ಆಗಿ ಜನರಿಗೆ ಪರಿಚಿತರಾದ ರಾಧಾ ಹಿರೇಗೌಡರ ನೇತೃತ್ವದಲ್ಲಿ ಈ ವಾಹಿನಿ ಇದೆ. ಯಾರಿದನ್ನು ಮುನ್ನಡೆಸುವವರು, ಮಾಲೀಕರು ಅಂದರೆ…”ಇಲ್ಲಿ ಎಲ್ಲರೂ ಕೆಲಸಗಾರರೇ” ಎಂಬ ಪ್ರತಿಕ್ರಿಯೆ ಬರುತ್ತದೆ.
ಯಾರೇ ಇರಲಿ. ವಾಹಿನಿ ಜನಪರವಾಗಿರಲಿ. ಅಂದರೆ ದನಿ ಇಲ್ಲದವರ ಪರವಾಗಿರಲಿ. ದುಡ್ಡು ಹಾಕಿ ವಾಹಿನಿ ನಡೆಸುತ್ತಿರುವವರಿಗೆ ಯಶಸ್ಸು ಸಿಗಲಿ. ಪತ್ರಕರ್ತ ಬಂಧುಗಳಿಗೆ ಒಳ್ಳೆ ಕೆಲಸ ಮಾಡಿದ ಖುಷಿ, ಸಮಾಧಾನ ದೊರೆಯಲಿ.

0 Comments