11 ವೈದಿಕ, ಬ್ರಾಹ್ಮಣಶಾಹಿ ಸಂಸ್ಥೆಗಳಿಗೆ 2.5 ಕೋಟಿ ರೂ. ಬಿಡುಗಡೆ

Dharaneesh Bookanakere |

Apr 18, 2025 | Political Diary

Dharaneesh Bookanakere

Apr 18, 2025 | Political Diary

ಉನ್ನತ ಶಿಕ್ಷಣ ಸಚಿವ ಸುಧಾಕರ್ ಗೆ ಮಾಹಿತಿ ಇಲ್ಲವೇ?

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿ ಬರುವ ವಿಶ್ವವಿದ್ಯಾಲಯಗಳಿಗೆ/ಸಂಸ್ಥೆಗಳಿಗೆ (ರಾಜ್ಯ ವಲಯದ ಯೋಜನೆಗಳು) ಸಂಬಂಧಿಸಿದಂತೆ 2025-26 ಸಾಲಿನ ಕಾರ್ಯಕ್ರಮಗಳ‌ ಅನುಷ್ಠಾನಕ್ಕೆ ಮೊದಲನೇ ತ್ರೈಮಾಸಿಕ ಅನುದಾನ ಬಿಡುಗಡೆ ವಿಷಯದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ವೈದಿಕಶಾಹಿ ನೀತಿಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ಕೊಂಚವೂ ಬದಲಾವಣೆ ಇಲ್ಲದಂತೆ ಮುಂದುವರೆಸಿದೆ.

ಒಟ್ಟು 2.5 ಕೋಟಿ ರೂಪಾಯಿ ಬಿಡುಗಡೆ ಮಾಡಿರುವ ಕುರಿತು ರಾಜ್ಯ ಸರ್ಕಾರ ‘ಕರ್ನಾಟಕ ಸರ್ಕಾರದ ನಡಾವಳಿಗಳು’ ಎಂದು ಸುತ್ತೋಲೆ ಪ್ರಕಟಿಸಿದೆ. ಇದರಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು ಅಕಾಡೆಮಿಗಳು ಒಳಗೊಂಡಿವೆ. ಅವುಗಳ ಜೊತೆಗೆ ಸಂಸ್ಕೃತ, ವೈದಿಕ ಸಂಶೋಧನಾ ಸಂಸ್ಥೆಗಳು ಅಡಿಯಲ್ಲಿ 11 ವೈದಿಕ, ಚಾತುರ್ವರ್ಣದ ಬ್ರಾಹ್ಮಣಶಾಹಿ ಸಂಸ್ಥೆಗಳಿಗೂ ಅನುದಾನ ಹಂಚಿಕೆ ಮಾಡಿದೆ. ಇದರ ದಾಖಲೆ (ಸುತ್ತೋಲೆ) Bookanakerediaryಗೆ ಲಭ್ಯವಾಗಿದೆ.

Bookanakerediaryಗೆ ಲಭ್ಯವಾಗಿರುವ ದಾಖಲೆಗಳಲ್ಲಿ ಹಿಂದಿನ ಬಿಜೆಪಿ ಸರ್ಕಾರದ ವೈದಿಕಶಾಹಿ ನೀತಿಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ಸ್ವಲ್ಪವೂ ಬದಲಾವಣೆ ಮಾಡದೆ ಮುಂದುವರೆಸಿರುವುದು ಸ್ಪಷ್ಟವಾಗಿ ತಿಳಿದುಬಂದಿದೆ. ಉನ್ನತ ಶಿಕ್ಷಣ ಸಚಿವ ಡಾ. ಎಂಸಿ ಸುಧಾಕರ್ ಅವರಿಗೆ ತಮ್ಮ ಇಲಾಖೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರದ ವೈದಿಕಶಾಹಿ ನೀತಿಗಳನ್ನು ಯಥಾವತ್ತು ಮುಂದುವರೆಸಿರುವ ಕುರಿತು ಮಾಹಿತಿ ಇಲ್ಲವೇ? ಅಥವಾ ಗೊತ್ತಿದ್ದೂ ಒಪ್ಪಿಕೊಂಡು ಮುಂದುವರಿಸಿದ್ದಾರೆಯೇ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಹಾಗೆಯೇ ಕೇಂದ್ರದ ಶಿಕ್ಷಣ ನೀತಿ ಕೇಸರೀಕರಣವಾಗಿದೆ ಎಂದು ರಾಜ್ಯ ಸರ್ಕಾರ ತನ್ನದೆಯಾದ ಪ್ರತ್ಯೇಕ ಶಿಕ್ಷಣ ನೀತಿಯನ್ನು ರೂಪಿಸುತ್ತಿದ್ದು ಆ ಕೆಲಸದಲ್ಲಿ ನಿರತರಾಗಿರುವವರು ಹಿಂದಿನ ಬಿಜೆಪಿ ಸರ್ಕಾರ ಮಾಡಿದಂತೆ 11 ವೈದಿಕ, ಚಾತುರ್ವರ್ಣದ ಬ್ರಾಹ್ಮಣಶಾಹಿ ಸಂಸ್ಥೆಗಳಿಗೆ ಅನುದಾನ ನೀಡುವುದನ್ನು ಒಪ್ಪುವರೇ? ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ.

Recent Article

Comments

0 Comments

Submit a Comment

Your email address will not be published. Required fields are marked *

Related Article

ಸ್ವಾಮೀಜಿಗಳನ್ನು ನಂಬಿ ರಾಜಕಾರಣ ಮಾಡುವವರು!

ಸ್ವಾಮೀಜಿಗಳನ್ನು ನಂಬಿ ರಾಜಕಾರಣ ಮಾಡುವವರು!

ಡಿಕೆ ಶಿವಕುಮಾರ್ ಅವರಿಗೆ ಸ್ವಾಮೀಜಿಗಳು ‘ನೀವು ಒಂದಲ್ಲಾ ಒಂದು ದಿನ ಮುಖ್ಯಮಂತ್ರಿ ಆಗೇ ಆಗುತ್ತೀರಿ’ ಎಂದಿದ್ದಾರಂತೆ. ಒಬ್ಬರಲ್ಲ, ಇಬ್ಬರಲ್ಲ ಮೂರ್ನಾಲ್ಕು ಸ್ವಾಮೀಜಿಗಳು ಹಾಗೆ ಹೇಳಿದ್ದಾರಂತೆ. ಅದರಿಂದಾಗಿ ಸಿದ್ದರಾಮಯ್ಯ ಅವರಿಂದ ಅಧಿಕಾರವನ್ನು ಕಿತ್ತುಕೊಳ್ಳುವುದು ಕಷ್ಟ ಎನ್ನುವುದು ಗೊತ್ತಿದ್ದರೂ, ತಮ್ಮ ವಿರುದ್ಧದ ಕಾನೂನು ಹೋರಾಟದ ಕುಣಿಕೆಗಳು ಬಿಗಿಯಾಗಬಹದು ಎಂಬ ಭಯವಿದ್ದರೂ ಡಿಕೆಶಿ ಸಿಎಂ ಆಗುವ ಪ್ರಯತ್ನವನ್ನು ನಿಲ್ಲಿಸಿಲ್ಲವಂತೆ. ಸಿಎಂ ಸ್ಥಾನವನ್ನು ಪಡೆದೇ ತಿರಬೇಕೆಂಬ ಹಠಕ್ಕೆ ಬಿದ್ದರೆ, ಅದೂ ಸಿಗದೆ ಜೊತೆಗೆ ಇರುವ ಕೆಪಿಸಿಸಿ ಕುರ್ಚಿಯನ್ನೂ ಕಳೆದುಕೊಳ್ಳಬೇಕಾದ ಸಂದರ್ಭ ಬರಬಹುದೆಂದು ಅರಿವಿದ್ದರೂ ಗುರಿಯಿಂದ ಹಿಂದೆ ಸರಿಯುತ್ತಿಲ್ಲವಂತೆ.

read more
ಕೇಂದ್ರದ ಬಜೆಟ್ ಕೂಡ ಹಲಾಲ್ ಬಜೆಟ್! ಹೇಗೆ ಗೊತ್ತಾ?

ಕೇಂದ್ರದ ಬಜೆಟ್ ಕೂಡ ಹಲಾಲ್ ಬಜೆಟ್! ಹೇಗೆ ಗೊತ್ತಾ?

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 4.09 ಲಕ್ಷ ಕೋಟಿ ರೂಪಾಯಿಗಳ 16ನೇ ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳಿಗೆ 51 ಸಾವಿರ ಕೋಟಿ ಕೊಟ್ಟಿರುವುದು, 1.16 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದರೂ ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (FRBM) ಕಾಯ್ದೆ ಉಲ್ಲಂಘನೆ ಆಗದಂತೆ ಗಮನಹರಿಸಿರುವುದು, ಕೃಷಿ, ಸಮಾಜಕಲ್ಯಾಣ, ಆರೋಗ್ಯ, ಶಿಕ್ಷಣ ಇಲಾಖೆಗಳಿಗೆ ಹೆಚ್ಚಿನ ಅನುದಾನ ನೀಡಿರುವುದು, ಪಡೆದದ್ದಕ್ಕೆ ಪ್ರತಿಯಾಗಿ ಅಪಾರ ಪ್ರಮಾಣದ ತೆರಿಗೆಯನ್ನು ವಾಪಸ್ ನೀಡುವ ಬೆಂಗಳೂರಿಗೆ ಭರಪೂರ ಹಣ ಹರಿಸಿರುವುದು ಗಮನಾರ್ಹ ಸಂಗತಿಗಳು.

read more
ಡಿಕೆಶಿ ಕಾಂಗ್ರೆಸ್ ಬಿಡಲ್ಲ !

ಡಿಕೆಶಿ ಕಾಂಗ್ರೆಸ್ ಬಿಡಲ್ಲ !

ರಾಜಕಾರಣಿಗಳು ಬೇರೆಯವರ ಭುಜದ ಮೇಲೆ ಬಂದೂಕಿಟ್ಟು ಗೋಲಿ ಚಲಾಯಿಸುವುದು ಜಾಸ್ತಿ. ಎಲ್ಲೋ ಯಾರಿಗೋ ಏನೋ ಸಂದೇಶ ಕೊಡಲು ಬೇರಾರನ್ನೋ ಬಳಸಿ ಬಿಸಾಡುತ್ತಾರೆ. ಡಿಕೆ ಶಿವಕುಮಾರ್-ಜಗ್ಗಿ ವಾಸುದೇವ್ ವಿಷಯದಲ್ಲೂ ಹೀಗೆ ಆಗಿರಬಹುದು. ಇದರ ಹೊರತಾಗಿ ಡಿಕೆಶಿ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ.

read more
Instagram
Instagram