ವಿಧಾನಸೌಧದ ಒಳಗೆ ಕಂಗೊಳಿಸಲಿವೆ ಹೊಸ ಫೋಟೋಗಳು!

Dharaneesh Bookanakere |

Feb 27, 2025 | Political Diary

Dharaneesh Bookanakere

Feb 27, 2025 | Political Diary

ಹಿಂದೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೋ ಹಾಕಿ ಅದು ದೊಡ್ಡ ವಿವಾದವಾಗಿತ್ತು. ಇತ್ತೀಚಿಗೆ ಸ್ಪೀಕರ್ ಯೂಟಿ ಖಾದರ್ ವಿಧಾನಸೌಧದಲ್ಲಿ ಮೈಸೂರು ಬಾಗಿಲು, ಗಂಡುಬೇರುಂಡ ಹಾಕಿ ‘ಹೊಸದೇನನ್ನೋ’ ಹೇಳಲು ಹೊರಟಿದ್ದರು. ಇದೀಗ ಶಾಸನಸಭೆಯ ಒಳಗೆ, ಆಡಳಿತ ಮತ್ತು ಪ್ರತಿಪಕ್ಷಗಳ ಲಾಂಜ್ ಗಳಲ್ಲಿ ಒಟ್ಟು ಎಂಟು ಕಡೆ ‘ಓಲ್ಡ್ ಪಬ್ಲಿಕ್ ಆಫೀಸ್’ ಫೋಟೋ ಹಾಕಲಿದ್ದಾರೆ ಎನ್ನುವ ಮಾಹಿತಿಗಳು ‘ಬೂಕನಕೆರೆ ಡೈರಿ’ಗೆ ಲಭಿಸಿವೆ.

ಏನದು ಓಲ್ಡ್ ಪಬ್ಲಿಕ್ ಆಫೀಸ್?

ಇದನ್ನು ಸರಳವಾಗಿ ಮೈಸೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಎನ್ನಬಹುದು. ಹಿಂದೆ ಓಲ್ಡ್ ಪಬ್ಲಿಕ್ ಆಫೀಸ್ (ಸಾರ್ವಜನಿಕ ಕಚೇರಿ ಕಟ್ಟಡ) ಎನ್ನುವ ಹೆಸರಿನಲ್ಲಿ ಕರೆಯಲಾಗುತ್ತಿತ್ತು. ಈ ಕಟ್ಟಡದ ಮಹತ್ವ ಏನೆಂದರೆ, 1881ರ ಅಕ್ಟೋಬರ್ 07ರಂದು ಇಲ್ಲಿ ಪ್ರಜಾಪ್ರತಿನಿಧಿಗಳ ಮೊದಲ ಸಭೆ ನಡೆದಿತ್ತು. ಅಂದಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸಿ. ರಂಗಾಚಾರ್ಲು ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಜಾಪ್ರತಿನಿಧಿಗಳ ಸಭೆಯಲ್ಲಿ ರೈತರು, ವರ್ತಕರು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಒಟ್ಟು 144 ಪ್ರತಿನಿಧಿಗಳು ಭಾಗವಾಹಿಸಿದ್ದರು.

1881ರ ಆಗಸ್ಟ್ 25ರಂದು 10ನೇ ಚಾಮರಾಜ ಒಡೆಯರ್ ಅವರು ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿದ್ದರು. ಆ ಮೂಲಕ ಮೈಸೂರು ಸಂಸ್ಥಾನಕ್ಕೆ ಇಡೀ ಭಾರತದಲ್ಲಿ ಮೊದಲು ಪ್ರಜಾಪ್ರಭುತ್ವ ಸಂಸ್ಥೆಯೊಂದನ್ನು ಆರಂಭಿಸಿದ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಯನ್ನು ತಂದುಕೊಟ್ಟಿದ್ದರು. ಇದರ ನೆನಪಿಗಾಗಿ ಶಾಸನಸಭೆಯ ಒಳಗೆ, ಆಡಳಿತ ಮತ್ತು ಪ್ರತಿಪಕ್ಷಗಳ ಲಾಂಜ್ ಗಳಲ್ಲಿ ಒಟ್ಟು ಎಂಟು ಕಡೆ ‘ಓಲ್ಡ್ ಪಬ್ಲಿಕ್ ಆಫೀಸ್’ ಫೋಟೋಗಳನ್ನು ಹಾಕಲಾಗುತ್ತಿದೆ ಎಂದು ‘ಬೂಕನಕೆರೆ ಡೈರಿ’ಗೆ ತಿಳಿದುಬಂದಿದೆ.

ಶಾಸನಸಭೆಯ ಒಳಗೆ, ಆಡಳಿತ ಮತ್ತು ಪ್ರತಿಪಕ್ಷಗಳ ಲಾಂಜ್ ಗಳಲ್ಲಿ ಅಳವಡಿಸಲಾಗುತ್ತಿರುವ ಫೋಟೋಗಳಿಗೆ ಸ್ಪೆಷಲ್ ಲೈಟಿಂಗ್ ಎಫೆಕ್ಟ್ ಇರಲಿದೆ. ಕರ್ನಾಟಕದ ಘನ ಇತಿಹಾಸ, ಅದರಲ್ಲೂ ಪ್ರಜಾಪ್ರಭುತ್ವ ಹರಳುಗಟ್ಟಲು ಆದ ಪ್ರಯತ್ನಗಳ ಬಗ್ಗೆ ಶಾಸಕರಿಗೆ ‘ಓಲ್ಡ್ ಪಬ್ಲಿಕ್ ಆಫೀಸ್’ ಫೋಟೋಗಳು ನೆನಪಿಸಬೇಕು ಎನ್ನುವ ಕಾರಣಕ್ಕಾಗಿಯೇ ಸ್ಪೆಷಲ್ ಲೈಟಿಂಗ್ ಎಫೆಕ್ಟ್ ಮಾಡಲಾಗಿದೆ. ಸ್ಪೀಕರ್, ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರು ವಿಧಾನಸೌಧದ ಒಳ ಪ್ರವೇಶಿಸುತ್ತಿದ್ದ ದ್ವಾರವನ್ನು ‘ಮೈಸೂರು ಬಾಗಿಲಾಗಿ’ ಪರಿವರ್ತಿಸಿದ ಬಳಿಕ ಸಿಕ್ಕ ಉತ್ತಮ ಪ್ರತಿಕ್ರಿಯೆ ‘ಓಲ್ಡ್ ಪಬ್ಲಿಕ್ ಆಫೀಸ್’ ಫೋಟೋಗಳ ಬಗ್ಗೆಗೂ ಸಿಗುತ್ತದೆ ಎನ್ನುವ ನಿರೀಕ್ಷೆ ವಿಧಾನಸಭಾ ಸಚಿವಾಲಯದ್ದು.

Recent Article

Comments

0 Comments

Submit a Comment

Your email address will not be published. Required fields are marked *

Related Article

11 ವೈದಿಕ, ಬ್ರಾಹ್ಮಣಶಾಹಿ ಸಂಸ್ಥೆಗಳಿಗೆ 2.5 ಕೋಟಿ ರೂ. ಬಿಡುಗಡೆ

11 ವೈದಿಕ, ಬ್ರಾಹ್ಮಣಶಾಹಿ ಸಂಸ್ಥೆಗಳಿಗೆ 2.5 ಕೋಟಿ ರೂ. ಬಿಡುಗಡೆ

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿ ಬರುವ ವಿಶ್ವವಿದ್ಯಾಲಯಗಳಿಗೆ/ಸಂಸ್ಥೆಗಳಿಗೆ (ರಾಜ್ಯ ವಲಯದ ಯೋಜನೆಗಳು) ಸಂಬಂಧಿಸಿದಂತೆ 2025-26 ಸಾಲಿನ ಕಾರ್ಯಕ್ರಮಗಳ‌ ಅನುಷ್ಠಾನಕ್ಕೆ ಮೊದಲನೇ ತ್ರೈಮಾಸಿಕ ಅನುದಾನ ಬಿಡುಗಡೆ ವಿಷಯದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ವೈದಿಕಶಾಹಿ ನೀತಿಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ಕೊಂಚವೂ ಬದಲಾವಣೆ ಇಲ್ಲದಂತೆ ಮುಂದುವರೆಸಿದೆ.

read more
ಸ್ವಾಮೀಜಿಗಳನ್ನು ನಂಬಿ ರಾಜಕಾರಣ ಮಾಡುವವರು!

ಸ್ವಾಮೀಜಿಗಳನ್ನು ನಂಬಿ ರಾಜಕಾರಣ ಮಾಡುವವರು!

ಡಿಕೆ ಶಿವಕುಮಾರ್ ಅವರಿಗೆ ಸ್ವಾಮೀಜಿಗಳು ‘ನೀವು ಒಂದಲ್ಲಾ ಒಂದು ದಿನ ಮುಖ್ಯಮಂತ್ರಿ ಆಗೇ ಆಗುತ್ತೀರಿ’ ಎಂದಿದ್ದಾರಂತೆ. ಒಬ್ಬರಲ್ಲ, ಇಬ್ಬರಲ್ಲ ಮೂರ್ನಾಲ್ಕು ಸ್ವಾಮೀಜಿಗಳು ಹಾಗೆ ಹೇಳಿದ್ದಾರಂತೆ. ಅದರಿಂದಾಗಿ ಸಿದ್ದರಾಮಯ್ಯ ಅವರಿಂದ ಅಧಿಕಾರವನ್ನು ಕಿತ್ತುಕೊಳ್ಳುವುದು ಕಷ್ಟ ಎನ್ನುವುದು ಗೊತ್ತಿದ್ದರೂ, ತಮ್ಮ ವಿರುದ್ಧದ ಕಾನೂನು ಹೋರಾಟದ ಕುಣಿಕೆಗಳು ಬಿಗಿಯಾಗಬಹದು ಎಂಬ ಭಯವಿದ್ದರೂ ಡಿಕೆಶಿ ಸಿಎಂ ಆಗುವ ಪ್ರಯತ್ನವನ್ನು ನಿಲ್ಲಿಸಿಲ್ಲವಂತೆ. ಸಿಎಂ ಸ್ಥಾನವನ್ನು ಪಡೆದೇ ತಿರಬೇಕೆಂಬ ಹಠಕ್ಕೆ ಬಿದ್ದರೆ, ಅದೂ ಸಿಗದೆ ಜೊತೆಗೆ ಇರುವ ಕೆಪಿಸಿಸಿ ಕುರ್ಚಿಯನ್ನೂ ಕಳೆದುಕೊಳ್ಳಬೇಕಾದ ಸಂದರ್ಭ ಬರಬಹುದೆಂದು ಅರಿವಿದ್ದರೂ ಗುರಿಯಿಂದ ಹಿಂದೆ ಸರಿಯುತ್ತಿಲ್ಲವಂತೆ.

read more
ಕೇಂದ್ರದ ಬಜೆಟ್ ಕೂಡ ಹಲಾಲ್ ಬಜೆಟ್! ಹೇಗೆ ಗೊತ್ತಾ?

ಕೇಂದ್ರದ ಬಜೆಟ್ ಕೂಡ ಹಲಾಲ್ ಬಜೆಟ್! ಹೇಗೆ ಗೊತ್ತಾ?

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 4.09 ಲಕ್ಷ ಕೋಟಿ ರೂಪಾಯಿಗಳ 16ನೇ ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳಿಗೆ 51 ಸಾವಿರ ಕೋಟಿ ಕೊಟ್ಟಿರುವುದು, 1.16 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದರೂ ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (FRBM) ಕಾಯ್ದೆ ಉಲ್ಲಂಘನೆ ಆಗದಂತೆ ಗಮನಹರಿಸಿರುವುದು, ಕೃಷಿ, ಸಮಾಜಕಲ್ಯಾಣ, ಆರೋಗ್ಯ, ಶಿಕ್ಷಣ ಇಲಾಖೆಗಳಿಗೆ ಹೆಚ್ಚಿನ ಅನುದಾನ ನೀಡಿರುವುದು, ಪಡೆದದ್ದಕ್ಕೆ ಪ್ರತಿಯಾಗಿ ಅಪಾರ ಪ್ರಮಾಣದ ತೆರಿಗೆಯನ್ನು ವಾಪಸ್ ನೀಡುವ ಬೆಂಗಳೂರಿಗೆ ಭರಪೂರ ಹಣ ಹರಿಸಿರುವುದು ಗಮನಾರ್ಹ ಸಂಗತಿಗಳು.

read more
Instagram
Instagram