ಗ್ಯಾರಂಟಿ ಟಿವಿ ಯಶಸ್ವಿಯಾಗಲಿ

Dharaneesh Bookanakere |

Feb 17, 2025 | Media Diary

Dharaneesh Bookanakere

Feb 17, 2025 | Media Diary

“ನೀವು ತಪ್ಪದೇ ಬರಬೇಕು..”
“ಮರೆಯದೇ ನಮ್ಮ ಕಚೇರಿಗೆ ಬರಲೇಬೇಕು”.. – ಹೀಗೊಂದು ಆಹ್ವಾನ.

ಅತ್ತ ಕಡೆಯಿಂದ.. “ಖಂಡಿತ ಬರ್ತೇವೆ. ಅಷ್ಟೇ ಏಕೆ..’ಗ್ಯಾರಂಟಿ’ ಬರ್ತೇವೆ” – ಎಂಬ ಉತ್ತರ.

ಇದು ಹಲವು ಮಾಧ್ಯಮ ಕಚೇರಿಗಳಲ್ಲಿ ಇತ್ತೀಚೆಗೆ ನಡೆದ ಚುಟುಕು ಸಂಭಾಷಣೆ. ವಿಷಯ ಇಷ್ಟೇ. ಹೊಸ ಸುದ್ದಿ ವಾಹಿನಿ ಆರಂಭವಾಗಿದೆ. ಹೆಸರು “ಗ್ಯಾರಂಟಿ ನ್ಯೂಸ್‌”.

ಕಳೆದ ಕೆಲವು ವರ್ಷಗಳ ಚುನಾವಣಾ ರಾಜಕಾರಣ “ಗ್ಯಾರಂಟಿ” ಎಂಬ ಪದವನ್ನು ಹೆಚ್ಚು ಚಾಲ್ತಿಗೆ ತಂದಿದೆ. ಗ್ಯಾರಂಟಿ ಸ್ಕೀಮ್ ಗಳನ್ನು ಒಪ್ಪುವವರು, ಬೇಡ ಎನ್ನುವವರು..ಹೀಗೆ ಎಲ್ಲರೂ ಈ ಬಗ್ಗೆ ಮಾತನಾಡಿದ್ದಾರೆ…ಇಲ್ಲ ಬರೆದಿದ್ದಾರೆ. ಆ ಕಾರಣಕ್ಕೆ ಈ ಪದ‌ ತುಂಬಾ ಕ್ಯಾಚಿ ಎನ್ನಿಸಿ ಈಗ ಸುದ್ದಿ‌ವಾಹಿನಿಯ ಹೆಸರಾಗಿದೆ.

ನ್ಯೂಸ್ ಪ್ರೆಸೆಂಟರ್ ಆಗಿ ಜನರಿಗೆ ಪರಿಚಿತರಾದ ರಾಧಾ ಹಿರೇಗೌಡರ ನೇತೃತ್ವದಲ್ಲಿ ಈ ವಾಹಿನಿ ಇದೆ. ಯಾರಿದನ್ನು ಮುನ್ನಡೆಸುವವರು, ಮಾಲೀಕರು ಅಂದರೆ…”ಇಲ್ಲಿ ಎಲ್ಲರೂ ಕೆಲಸಗಾರರೇ” ಎಂಬ ಪ್ರತಿಕ್ರಿಯೆ ಬರುತ್ತದೆ.

ಯಾರೇ ಇರಲಿ. ವಾಹಿನಿ ಜನಪರವಾಗಿರಲಿ. ಅಂದರೆ ದನಿ‌ ಇಲ್ಲದವರ ಪರವಾಗಿರಲಿ. ದುಡ್ಡು ಹಾಕಿ ವಾಹಿನಿ‌ ನಡೆಸುತ್ತಿರುವವರಿಗೆ ಯಶಸ್ಸು ಸಿಗಲಿ. ಪತ್ರಕರ್ತ ಬಂಧುಗಳಿಗೆ ಒಳ್ಳೆ ಕೆಲಸ ಮಾಡಿದ ಖುಷಿ, ಸಮಾಧಾನ ದೊರೆಯಲಿ.

Recent Article

Comments

0 Comments

Submit a Comment

Your email address will not be published. Required fields are marked *

Related Article

He is a very good planter!

He is a very good planter!

ಕಾಂಗ್ರೆಸ್ ಹೈಕಮಾಂಡ್ ಪ್ರಭಾವಿ ಮುಖಂಡ ದಿವಂಗತ ಅಹಮದ್ ಪಟೇಲ್ ಒಮ್ಮೆ ಬೆಂಗಳೂರಿಗೆ ಬಂದಿದ್ದರು. ಹೀಗೆ ಹೈಕಮಾಂಡ್ ಪ್ರತಿನಿಧಿಗಳು ಯಾರಾದರೂ ಬರುತ್ತಾರೆ ಎಂದರೆ ಕಾಂಗ್ರೆಸ್ ಪಕ್ಷದ ನಾಯಕರೇ ಕಾಲಾಳುಗಳಾಗಿ ಸೇವೆ ಮಾಡಲು ಮುಂದೆ ನಿಂತಿರುತ್ತಿದ್ದ ಕಾಲ ಅದು.

read more
ಸುದ್ದಿ ಮನೆಯ ಸಂಕಟ; ಇದ್ದ ಮೂರೇ ಜನದಲ್ಲಿ ಹೇಳುವವರು ಯಾರು?

ಸುದ್ದಿ ಮನೆಯ ಸಂಕಟ; ಇದ್ದ ಮೂರೇ ಜನದಲ್ಲಿ ಹೇಳುವವರು ಯಾರು?

2018ರಲ್ಲಿ ಯಾರು ಸಿಬಿಐ ನಿರ್ದೇಶಕರಾಗುತ್ತಾರೆ ಎನ್ನುವ ಕುತೂಹಲ ರಾಷ್ಟ್ರ ರಾಜಧಾನಿಯ ಚಳಿಗೆ ಸೆಡ್ಡು ಹೊಡೆದಿತ್ತು. ಮೋದಿ-ಅಮಿತ್ ಶಾ ಕಣ್ಸನ್ನೆಯಂತೆ ಕೆಲಸ ಮಾಡುವ ಗುಜರಾತ್ ಕೇಡರ್ ಅಧಿಕಾರಿ ಬರಬಹುದೆಂಬ ಗುಲ್ಲು ಇತ್ತು.

read more
Instagram
Instagram