He is a very good planter!

Dharaneesh Bookanakere |

Feb 17, 2025 | Media Diary

Dharaneesh Bookanakere

Feb 17, 2025 | Media Diary

ಕಾಂಗ್ರೆಸ್ ಹೈಕಮಾಂಡ್ ಪ್ರಭಾವಿ ಮುಖಂಡ ದಿವಂಗತ ಅಹಮದ್ ಪಟೇಲ್ ಒಮ್ಮೆ ಬೆಂಗಳೂರಿಗೆ ಬಂದಿದ್ದರು. ಹೀಗೆ ಹೈಕಮಾಂಡ್ ಪ್ರತಿನಿಧಿಗಳು ಯಾರಾದರೂ ಬರುತ್ತಾರೆ ಎಂದರೆ ಕಾಂಗ್ರೆಸ್ ಪಕ್ಷದ ನಾಯಕರೇ ಕಾಲಾಳುಗಳಾಗಿ ಸೇವೆ ಮಾಡಲು ಮುಂದೆ ನಿಂತಿರುತ್ತಿದ್ದ ಕಾಲ ಅದು. ಅಹಮದ್ ಪಟೇಲ್ ಏಟ್ರಿಯಾ ಹೋಟೆಲ್ ನಲ್ಲಿ ಉಳಿದಿದ್ದರು. ಆಗ ಏಟ್ರಿಯಾ ಹೋಟೆಲ್ ಹೊರಗಿನಿಂದ ಬರುವ ರಾಜಕಾರಣಿಗಳಿಗೆ ತವರುಮನೆ ರೀತಿ ಇತ್ತು.

ಪಕ್ಷದ ಮುಖಂಡರ ಭೇಟಿ ಮುಗಿಸಿದ ಅವರು ಸಂಜೆ ಹೋಟೆಲ್ ಗೆ ತೆರಳಿ ವಿರಮಿಸುತ್ತಿದ್ದರು. ರೂಮಿಗೆ ಪಿ. ಲಂಕೇಶ್ ಅವರಿಂದ ಪ್ರಭಾವಿತರಾಗಿದ್ದ ರಾಜಕಾರಣಿಯೊಬ್ಬರು ಬಂದರು. ಜೊತೆಗೊಬ್ಬ ಪತ್ರಕರ್ತನನ್ನು ಕರೆತಂದಿದ್ದರು. ಪತ್ರಕರ್ತ ಬಂದಿದ್ದು ಅಹಮದ್ ಪಟೇಲ್ ಬೆಂಗಳೂರಿನ ಭೇಟಿಯ Exclusive ಸುದ್ದಿಗಾಗಿ. ಈ ಪತ್ರಕರ್ತರನ್ನು ಅಹಮದ್ ಪಟೇಲ್ ಗೆ ಪರಿಚಯಿಸುತ್ತಾ ‘Sir He is very good planter’ ಎಂದಿದ್ದಾರೆ.

ತಕ್ಷಣವೇ ಪ್ರತ್ರಿಕ್ರಿಯಿಸಿದ ಅಹಮದ್ ಪಟೇಲ್ ‘Nice, How is your plant? Where is it? Is it near to Benglore? ಅಂತಾ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ್ದಾರೆ. ಆಗ ಮಧ್ಯ ಬಾಯಿ ಹಾಕಿದ ಆ ರಾಜಕಾರಣಿ, Sir, he is story planter, he will plant the story in all news papers. He is master in planting ಎಂದರಂತೆ. ಅಹಮದ್ ಪಟೇಲ್ ಬಿದ್ದು ಬಿದ್ದು ನಕ್ಕರಂತೆ!

ಆಮೇಲೆ ಅಹಮದ್ ಪಟೇಲ್ ಏನು ಹೇಳಿದರು ಮತ್ತು ಆ ಪತ್ರಕರ್ತ ಏನು ವರದಿ ಮಾಡಿದರು ಎನ್ನುವುದು ಬೇರೆ ವಿಷಯ. ಆದರೆ ಆ ಕಾಲದಿಂದಲೂ ಇಂಥ ಪ್ಲಾಂಟಿಂಗ್ ಪದ್ಧತಿ ಇತ್ತು ಎನ್ನುವುದು ಮಾತ್ರ ಅಸಲಿಯತ್ತು. ಈಗ ಬಿಡಿ ಪ್ಲಾಂಟಿಂಗ್ ಮಾಡುವುದರಲ್ಲಿ ಪಂಟರ್ ಗಳು ತುಂಬಿ ತುಳುಕುತ್ತಿದ್ದಾರೆ. ಟಿವಿ ಲೋಕದಲ್ಲಂತೂ ಸುದ್ದಿಗಳು ಗಂಟೆಗೊಮ್ಮೆ ಹುಟ್ಟುತ್ತವೆ, ಗಂಟೆಗೊಮ್ಮೆ ಸಾಯುತ್ತವೆ.

Recent Article

Comments

0 Comments

Submit a Comment

Your email address will not be published. Required fields are marked *

Related Article

ಗ್ಯಾರಂಟಿ ಟಿವಿ ಯಶಸ್ವಿಯಾಗಲಿ

ಗ್ಯಾರಂಟಿ ಟಿವಿ ಯಶಸ್ವಿಯಾಗಲಿ

ಕಳೆದ ಕೆಲವು ವರ್ಷಗಳ ಚುನಾವಣಾ ರಾಜಕಾರಣ “ಗ್ಯಾರಂಟಿ” ಎಂಬ ಪದವನ್ನು ಹೆಚ್ಚು ಚಾಲ್ತಿಗೆ ತಂದಿದೆ. ಗ್ಯಾರಂಟಿ ಸ್ಕೀಮ್ ಗಳನ್ನು ಒಪ್ಪುವವರು, ಬೇಡ ಎನ್ನುವವರು..ಹೀಗೆ ಎಲ್ಲರೂ ಈ ಬಗ್ಗೆ ಮಾತನಾಡಿದ್ದಾರೆ…ಇಲ್ಲ ಬರೆದಿದ್ದಾರೆ. ಆ ಕಾರಣಕ್ಕೆ ಈ ಪದ‌ ತುಂಬಾ ಕ್ಯಾಚಿ ಎನ್ನಿಸಿ ಈಗ ಸುದ್ದಿ‌ವಾಹಿನಿಯ ಹೆಸರಾಗಿದೆ.

read more
ಸುದ್ದಿ ಮನೆಯ ಸಂಕಟ; ಇದ್ದ ಮೂರೇ ಜನದಲ್ಲಿ ಹೇಳುವವರು ಯಾರು?

ಸುದ್ದಿ ಮನೆಯ ಸಂಕಟ; ಇದ್ದ ಮೂರೇ ಜನದಲ್ಲಿ ಹೇಳುವವರು ಯಾರು?

2018ರಲ್ಲಿ ಯಾರು ಸಿಬಿಐ ನಿರ್ದೇಶಕರಾಗುತ್ತಾರೆ ಎನ್ನುವ ಕುತೂಹಲ ರಾಷ್ಟ್ರ ರಾಜಧಾನಿಯ ಚಳಿಗೆ ಸೆಡ್ಡು ಹೊಡೆದಿತ್ತು. ಮೋದಿ-ಅಮಿತ್ ಶಾ ಕಣ್ಸನ್ನೆಯಂತೆ ಕೆಲಸ ಮಾಡುವ ಗುಜರಾತ್ ಕೇಡರ್ ಅಧಿಕಾರಿ ಬರಬಹುದೆಂಬ ಗುಲ್ಲು ಇತ್ತು.

read more
Instagram
Instagram