ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆಗೆ ಲಾಬಿ ಶುರು

Dharaneesh Bookanakere |

Feb 17, 2025 | Officers Diary

Dharaneesh Bookanakere

Feb 17, 2025 | Officers Diary

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಬೆಂಗಳೂರು ಮಹಾನಗರದ ಪೊಲೀಸ್ ಕಮಿಷನರ್ ಆಗಲು DG & IGP ಹುದ್ದೆಗಿಂತಲೂ ಹೆಚ್ಚು ಪೈಪೋಟಿ ಮತ್ತು ಲಾಭಿ ನಡೆಯುತ್ತದೆ. ಬಿ ದಯಾನಂದ್ ಅವರನ್ನು 2023ರ ಮೇ 31ರಂದು ಹಾಲಿ ಪೊಲೀಸ್ ಕಮಿಷನರ್ ಆಗಿ ನೇಮಿಸಲಾಗಿತ್ತು. ಈ ವರ್ಷದ ಮೇ ತಿಂಗಳ ಕೊನೆಗೆ ಅವರಿಗೆ DGಯಾಗಿ ಭಡ್ತಿ ಸಿಗುವುದರಿಂದ ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆ ಪಡೆಯಲು ಈಗಿನಿಂದಲೇ ಸದ್ದಿಲ್ಲದೆ ಸರ್ಕಾರದ ಮಟ್ಟದಲ್ಲಿ ಲಾಭಿ ಶುರುವಾಗಿದೆ.

ಸಾಮಾನ್ಯವಾಗಿ DG & IGP ಹುದ್ದೆಗಳನ್ನು ಕೊಡುವಾಗ ಬಹುತೇಕ ಸೇವಾ ಹಿರಿತನವನ್ನು ಪರಿಗಣಿಸಲಾಗುತ್ತದೆ. ಆದರೆ ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆಯ ವಿಷಯದಲ್ಲಿ ಕೆಲವೊಮ್ಮೆ ಹಿರಿತನವನ್ನು ಬದಿಗೊತ್ತಿ ಸರ್ಕಾರ ನಡೆಸುವವರಿಗೆ ಯಾರು ಆಪ್ತರೋ ಅವರಿಗೆ ಕೊಡಲಾಗುತ್ತದೆ. ಹಾಗಾಗಿ ಇಲ್ಲಿ ಅರ್ಹತೆಗಿಂತ ಪ್ರಭಾವ ಹೆಚ್ಚು ಕೆಲಸ ಮಾಡುತ್ತದೆ. ಯಾರು ಸರ್ಕಾರದ ಮೇಲೆ ಹೆಚ್ಚು ಪ್ರಭಾವ ಬಿರುತ್ತಾರೋ ಅವರು ಹುದ್ದೆ ಗಿಟ್ಟಿಸುವುದು ಮಾಮೂಲಿಯಾಗಿದೆ.

ಹಿಂದೆ ಕಮಲ್ ಪಂತ್ DG ಆಗಿ ಭಡ್ತಿ ಪಡೆದ ನಂತರವೂ ADGP ಪೋಸ್ಟ್ ಆದ ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆಯಲ್ಲೇ ಮುಂದುವರೆದಿದ್ದರು. ಅದೇ ರೀತಿ ಬಿ ದಯಾನಂದ್ ಅವರು DG ಆದ ಮೇಲೂ ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆಯಲ್ಲಿ ಮುಂದುವರೆಯಲು ಮನಸ್ಸು ಮಾಡುತ್ತಾರೋ ಇಲ್ಲವೋ ಎನ್ನುವುದು ಸದ್ಯಕ್ಕೆ ಗೊತ್ತಾಗಿಲ್ಲ.

ಉಳಿದಂತೆ ದಯಾನಂದ್ ಅವರಿಗೆ ಭಡ್ತಿ ಸಿಕ್ಕಿದರೆ ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆ ತೆರವಾಗಬಹುದು ಎಂದು ಆ ಸ್ಥಾನಕ್ಕೆ ಬರಲು ಇರುವ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಗುಪ್ತಚಾರ ಇಲಾಖೆಯ ADGP ಹಾಗು ವಾರ್ತಾ ಮತ್ತು ಪ್ರಸಾರ ಇಲಾಖೆ ನಿರ್ದೇಶಕರಾಗಿರುವ ಹೇಮಂತ್ ನಿಂಬಾಳ್ಕರ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್. ಹಿತೇಂದ್ರ ಮತ್ತು ಗೌರಿ ಲಂಕೇಶ್ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದ SIT ಮುಖ್ಯಸ್ಥ ಮತ್ತು ಹಾಲಿ ಸಿಐಡಿ ಎಡಿಜಿಪಿ ಬಿಕೆ ಸಿಂಗ್ (ಬಿಜಾಯ್ ಕುಮಾರ್ ಸಿಂಗ್) ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.

ಇವರೆಲ್ಲರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಅಂತಿಮವಾಗಿ ಸಿದ್ದರಾಮಯ್ಯ ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ. ಇದಲ್ಲದೆ ಐಪಿಎಸ್ ಅಧಿಕಾರಿಗಳಾದ ಶರತ್ ಚಂದ್ರ, ಸೀಮಂತ್ ಕುಮಾರ್ ಸಿಂಗ್, ಅರುಣ್ ಚಕ್ರವರ್ತಿ, ಎಸ್. ರವಿ, ಹರಿಶೇಖರನ್ ಮತ್ತಿತರ ಹೆಸರುಗಳು ಕೂಡ ಕೇಳಿಬರುತ್ತಿವೆ.

1963ರಲ್ಲಿ ಬೆಂಗಳೂರು ಪೊಲೀಸ್ ಕಮಿಷನರೇಟ್ ಸೃಷ್ಟಿಯಾಯಿತು. ADGP ದರ್ಜೆಯ ಐಪಿಎಸ್ ಅಧಿಕಾರಿಗಳನ್ನು ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆಗೆ ಪರಿಗಣಿಸಲಾಗುತ್ತದೆ. ಸಿ. ಚಂಡಿ ಅವರು ರಾಜ್ಯ ರಾಜಧಾನಿಯ ಮೊದಲ ಪೊಲೀಸ್ ಕಮಿಷನರ್ ಆಗಿ ಕೆಲಸ ಮಾಡಿದ್ದರು. ಅಲ್ಲಿಂದ ಈವರೆಗೆ ಒಟ್ಟು 32 ಮಂದಿ ಪೊಲೀಸ್ ಕಮಿಷನರ್ ಆಗಿ ಬಂದಿದ್ದಾರೆ. 33ನೇ ಪೊಲೀಸ್ ಕಮಿಷನರ್ ಆಗುವವರು ಯಾರು ಎನ್ನುವುದು ಸದ್ಯದ ಕುತೂಹಲ.

Recent Article

Comments

0 Comments

Submit a Comment

Your email address will not be published. Required fields are marked *

Related Article

ಈ  ವರ್ಷ ನಿವೃತ್ತರಾಗಲಿರುವ IAS, IPS ಅಧಿಕಾರಿಗಳು!

ಈ ವರ್ಷ ನಿವೃತ್ತರಾಗಲಿರುವ IAS, IPS ಅಧಿಕಾರಿಗಳು!

ಈ ವರ್ಷ ಐಎಎಸ್ ಅಧಿಕಾರಿಗಳಾದ ಜಯವಿಭವ ಸ್ವಾಮಿ ಮಾರ್ಚ್ 31 ರಂದು, ಎಸ್.ಆರ್. ಉಮಾಶಂಕರ್ ಏಪ್ರಿಲ್ 30 ರಂದು, ಎನ್. ಜಯರಾಂ ಮೇ 31ರಂದು, ಅತಿಲ್‌ಕುಮಾರ್ ತಿವಾರಿ, ಜಿ. ಸತ್ಯವತಿ, ಅಜಯ್ ಸೇರ್ ಜೂನ್ 30 ರಂದು ಹಾಗೂ ನಿಲಯ ಮಿತಾಶ್ ಡಿಸಂಬರ್ 31 ರಂದು ನಿವೃತ್ತಿಯಾಗಲಿದ್ದಾರೆ.

read more
ಕುಸಿಯುತ್ತಿರುವ ಕಾರ್ಯಾಂಗದ ಕ್ಷಮತೆ

ಕುಸಿಯುತ್ತಿರುವ ಕಾರ್ಯಾಂಗದ ಕ್ಷಮತೆ

ರಾಜ್ಯ ಸರ್ಕಾರ ಟೆಕ್ ಆಫ್ ಆಗಿಲ್ಲ. ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆಡಳಿತ ಯಂತ್ರ ಕುಸಿದಿದೆ ಎನ್ನುವ ಮಾತುಗಳನ್ನು ಆಗಾಗ ಕೇಳುತ್ತಿರುತ್ತೇವೆ. ಕಾರ್ಯಾಂಗಕ್ಕೆ ಸಂಬಂಧಿಸಿದ ಇಂಥ ದೂರುಗಳಿಗೆ ಉತ್ತರ ಅಥವಾ ಸ್ಪಷ್ಟೀಕರಣ ಕೊಡಬೇಕಾದುದು ಶಾಸಕಾಂಗದ ಅದರಲ್ಲೂ ಆಡಳಿತಾರೂಢ ಪಕ್ಷದ ಕರ್ತವ್ಯ.

read more
Instagram
Instagram