ʻಅಪ್ಪಯ್ಯʼನ ಆ ದಿನಗಳು ಮಗನ ಲೇಖನಿಯಿಂದ

Dharaneesh Bookanakere |

Feb 17, 2025 | Cultural Diary

Dharaneesh Bookanakere

Feb 17, 2025 | Cultural Diary

ಪುಸ್ತಕ ಕುರಿತು ಮಾತನಾಡುತ್ತಿದ್ದ ಸುಧೀರ್‌ ಕುಮಾರ್‌ ಮುರೊಳ್ಳಿಯವರು ಒಂದು ಪ್ರಸಂಗ ನಿರೂಪಿಸಿದರು. ಜಿ.ಟಿ. ಸತ್ಯನಾರಾಯಣ ಅವರು ತಮ್ಮ ತಂದೆಯ ಕುರಿತ ʼಅಪ್ಪಯ್ಯʼ ಕೃತಿಯಲ್ಲಿ ದಾಖಲಿಸಿದ್ದ ಸಂದರ‍್ಭವೇ ಅದು. ಪೇಟೆ ತಿಮ್ಮಪ್ಪನವರು ಯಾವುದೋ ಒಂದು ಸಿಟ್ಟಿನ ಗಳಿಗೆಯಲ್ಲಿ ಹೆಂಡತಿ ಬಚ್ಚಮ್ಮನಿಗೆ ಏರು ದನಿಯಲ್ಲಿ ಮಾತನಾಡಿದ್ರು. ಎಂದೂ ಹಾಗೆ ಮಾತನಾಡದವರು ಅಂದು ಹಾಗೆ ಹೇಳಿದ್ದು ಹೆಂಡತಿಗೆ ಸಹಿಸಲಾಗಲಿಲ್ಲ. ಕಣ್ಣೋಟದ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ತಕ್ಷಣ ಮರುಗಿ ತಾವು ಆಡಿದ್ದ ಮಾತನ್ನು ʼವಾಪಾಸು ಪಡೆದೆʼ ಎಂದು ಹೇಳಿ ತಿಳಿಗೊಳಿಸಿದ್ದರು ತಿಮ್ಮಪ್ಪ.

ಮುರೊಳ್ಳಿಯವರು ಆ ಬಗ್ಗೆ ಹೇಳುತ್ತಿರುವಾಗ, ನೆರೆದ ಜನರು ಸಹಜ ಕುತೂಹಲಕ್ಕೆ ತಿಮ್ಮಪ್ಪ ಹಾಗೂ ಬಚ್ಚಮ್ಮರ ಮುಖಭಾವ ಹೇಗಿರಬಹುದೆಂದು ಸಭಾಮಂಟಪದಲ್ಲಿದ್ದ ಅವರ ಕಡೆ ಕಣ್ಣು ಹಾಯಿಸಿದರು. ತಿಮ್ಮಪ್ಪನವರ ಒಂದು ಕೈ ಎಡಕಣ್ಣಿನ ಅಂಚಿನಲ್ಲಿತ್ತು. ಅದುವರೆಗೆ ಇದ್ದ ಉತ್ಸಾಹ ಮುಖದಲ್ಲಿ ಮಾಯವಾಗಿತ್ತು. ಬಚ್ಚಮ್ಮ ಎದುರು ನೋಡುತ್ತಿರುವವರ ಕಣ್ಣುಗಳನ್ನು ಅವಾಯ್ಡ್‌ ಮಾಡಲೇನೋ ಎಂಬಂತೆ ಮೋಡದ ಕಡೆ ಮುಖಮಾಡಿದರು.

ನೆನಪುಗಳನ್ನು ಬರೆಯುವುದೆಂದರೆ ಜೊತೆಯವರನ್ನು ಇಂತಹ ಭಾವುಕ ಕ್ಷಣಗಳಿಗೆ ಎದುರು ಮಾಡುವುದೆಂದೇ. ಸತ್ಯನಾರಾಯಣ ಅವರ ನೆನಪುಗಳ ಗುಚ್ಚ ʼಅಪ್ಪಯ್ಯʼ ಓದಿದಾಗಿನಿಂದ ಇರುವ ಕುತೂಹಲ, ಕೃತಿಯ ಮುಖ್ಯ ವ್ಯಕ್ತಿತ್ವಗಳಾದ ಪೇಟೆ ತಿಮ್ಮಯ್ಯ ಹಾಗೂ ಬಚ್ಚಮ್ಮ ಇದನ್ನೆಲ್ಲಾ ಓದಿ ಹೇಗೆ ಪ್ರತಿಕ್ರಿಯಿಸಬಹುದು.

ಹೆಸರೇ ಹೇಳುವಂತೆ ಇದು ಅಪ್ಪನ ಬಗ್ಗೆ ಮಗ ಬರೆದಿರುವ ಪುಸ್ತಕ ಇದು. ಹಾಗಂತ ಕೇವಲ ಅಪ್ಪಯ್ಯ ಅಲ್ಲ. ಅವರ ಸಂಸಾರ, ಮಕ್ಕಳು, ಕೌಟುಂಬಿಕ ಹಿನ್ನೆಲೆ, ನದಿ, ಅಣೆಕಟ್ಟು, ಸೇತುವೆ, ಮುಳುಗಡೆ, ಭೂಮಿ, ಜಾತಿ ತಾರತಮ್ಯ, ಅವಮಾನ, ಬಡತನ ಎಲ್ಲವೂ ಮಗನ ಮೂಲಕ ದಾಖಲಾಗಿವೆ. ಅಪ್ಪಯ್ಯನ ಜೀವನವನ್ನು ದಾಖಲಿಸುವ ಮೂಲಕ ಲೇಖಕ ಸತ್ಯನಾರಾಯಣ ತನ್ನ ಇದುವರೆಗಿನ ದಿನಗಳನ್ನು ನಿರೂಪಿಸಿದ್ದಾರೆ.

ಪುಸ್ತಕ ಬಿಡುಗಡೆಯಾದ ಕಾರ‍್ಯಕ್ರಮವೇ ಒಂದು ವಿಶೇಷ. ಅವರ ಮನೆಯ ಪಕ್ಕದ ಕಾಡಿನಲ್ಲಿ (ಬಹುಷ ಸೊಪ್ಪಿನಬೆಟ್ಟ) ಹಿರಿಯ ರಾಜಕಾರಣಿ, ಹೋರಾಟಗಾರ ಕಾಗೋಡು ತಿಮ್ಮಪ್ಪ ಅಕ್ಟೋಬರ್‌ ೨೯ ರಂದು ಬಿಡುಗಡೆ ಮಾಡಿದರು. ಅಲ್ಲಿಗೆ ಬಂದವರಿಗೆಲ್ಲಾ ಪ್ರಮುಖ ಆಕರ್ಷಕವಾಗಿ ಕಂಡಿದ್ದು ಆ ಜಾಗ. ಸತ್ಯನಾರಾಯಣ ಹೇಳುವಂತೆ, ತನ್ನ ಅಪ್ಪನಿಗೆ ದುರಾಸೆ ಇದ್ದಿದ್ದರೆ ತಮ್ಮ ಜಮೀನಿಗೆ ಅಂಟಿಕೊಂಡಿರುವ ಸೊಪ್ಪಿನ ಬೆಟ್ಟವನ್ನೆಲ್ಲಾ ಒತ್ತುವರಿ ಮಾಡಿ ಕೃಷಿಗೆ ಅಣಿ ಮಾಡಬಹುದಿತ್ತು. ಹಾಗೆ ಮಾಡಲಿಲ್ಲ. ಆ ಕಾರಣಕ್ಕೆ ಅಲ್ಲಿ ಪ್ರಶಾಂತ ವಾತಾವರಣ ಇತ್ತು. ಒಂದು ಅಡಿಯ ಶಾಮಿಯಾನ ಕೂಡ ಇಲ್ಲದೆ ಜನ ನೆರಳಲ್ಲೇ ಕುಳಿತು ಪುಸ್ತಕ ಬಿಡುಗಡೆಗೆ ಸಾಕ್ಷಿಯಾದರು.

ತುಮರಿ ಸುತ್ತಮುತ್ತಲಿನ ಜನ ಯಾರೇ, ಎಲ್ಲಿಯೇ ಭೇಟಿಯಾಗಲಿ, ಮುಳುಗಡೆ, ಲಾಂಚ್‌, ಹಿನ್ನೀರು ಮತ್ತು ಇವೆಲ್ಲಾ ತಂದೊಡ್ಡಿರುವ ಸಮಸ್ಯೆಗಳ ಚರ್ಚೆಯಾಗದೆ ಮಾತು ಮುಗಿಯುವುದಿಲ್ಲ. ಇನ್ನು ಅಲ್ಲಿನವರ ಬದುಕನ್ನು ಬರೆಯಲು ಹೊರಟರೆ ಆ ಸಂಗತಿಗಳನ್ನು ಈ ಜ್ವಲಂತ ವಿಚಾರಗಳನ್ನು ಬಿಟ್ಟು ಬೇರೆ ಏನನ್ನು ತಾನೆ ಹೇಳುವುದು? ಸ್ವಾತಂತ್ರ‍್ಯಕ್ಕೆ ಮೊದಲೇ ಇಲ್ಲಿರುವ ಜನ ಮಡೆನೂರು ಅಣೆಕಟ್ಟಿಗಾಗಿ ಕಷ್ಟ ಅನುಭವಿಸಿದವರು. ಆಗ ೭೦ ಹಳ್ಳಿಗಳಲ್ಲಿದ್ದ ಜನ ಊರು ಬಿಡಬೇಕಾಯುತು. ನಂತರ ಬಂದ ಲಿಂಗನಮಕ್ಕಿ ಸೇತುವೆ ಕಾರಣ ಅದೇ ಪ್ರದೇಶದ ಒಟ್ಟು ೧೫೨ ಹಳ್ಳಿಗಳ ಜನ ಬೇರೆ ಕಡೆ ಹೊರಡಬೇಕಾಯ್ತು. ಇಲ್ಲೇ ಇದ್ದವರು ದ್ವೀಪವಾಸಿಗಳಾದರು.

ಅದರಾಚೆಗೆ ಓದುಗರನ್ನು ಹಿಡಿದು ನಿಲ್ಲಿಸುವ ಅನೇಕ ಸಂದರ್ಭಗಳು ಇಲ್ಲಿವೆ. ನಾಲ್ಕನೇ ಕ್ಲಾಸ್ ವರೆಗೆ ಓದಿದ್ದ ಅಪ್ಪ ವಿದ್ಯಾಭ್ಯಾಸದ ಅಗತ್ಯವನ್ನು ಚೆನ್ನಾಗಿ ಅರಿತಿದ್ದರು. ಜೊತೆಗೆ ಎಂತಹ ವಿದ್ಯಾಭ್ಯಾಸ ಬೇಕು ಎಂಬುದನ್ನೂ. ತಮ್ಮ ಆರ್ಥಿಕ ಸ್ಥಿತಿಗತಿಗಳ ಮಿತಿಯೊಳಗೇ ಮಕ್ಕಳನ್ನು ಓದಿಸಿದರು. ಅವರು ಸೂಕ್ಷ್ಮ ಸಂದರ್ಭಗಳನ್ನು ಎದುರಿಸುವ ಪರಿ ವಿಶೇಷ. ಮಕ್ಕಳು ಶಾಲೆಗೆ ಮೀನುಸಾರು ತಂದಿದ್ದರು ಎಂಬ ಕಾರಣಕ್ಕೆ ದಂಡಿಸಿದ್ದ ಶಿಕ್ಷಕರ ಅಜ್ಞಾನ ಕಂಡು ಕೋಪಗೊಂಡರು. ಅದೇ ಶಾಲೆಯ ಇನ್ನೊಬ್ಬ ಶಿಕ್ಷಕರನ್ನು ಮನೆಗೆ ಕರೆಸಿ ಅದೇ ಮೀನಿನ ಊಟ ಹಾಕಿ, ಹೇಳಬೇಕಾದ್ದನ್ನು ಹೇಳಿ ತಲುಪಿಸಬೇಕಾದವರಿಗೆ ತಲುಪಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ ಮಗ ಫೇಲ್‌ ಆಗಿದ್ದಾಗ ನಡೆದುಕಳ್ಳುವ ರೀತಿ. ಗೆಳೆಯರ ಜೊತೆ ಸೇರಿದಾಗ ಆದ ಅಚಾತುರ್ಯಕ್ಕೆ ಮಗನ ಮೇಲೆ ಆಪಾದನೆ ಬಂದಾಗ ತೆಗೆದುಕೊಂಡ ನಿಲುವು ಎಲ್ಲವೂ ಅಪ್ಪ-ಮಗನ ಸಂಬಂಧ ಸೂಕ್ಷ್ಮಗಳನ್ನು ತೆರೆದಿಡುತ್ತವೆ.ಲೇಖಕರು ಹೇಳುವ ಹಾಗೆ, ಅಪ್ಪಯ್ಯ ಗಾಂಧಿಯನ್ನಾಗಲಿ, ಅಂಬೇಡ್ಕರ್‌ ನ್ನಾಗಲಿ ಅಥವಾ ಯಾವ ಸಮಾಜ ಸುಧಾರಕರನ್ನೇ ಆಗಲಿ ಓದಿ ತಿಳಿದವರಲ್ಲ. ಆದರೆ ಅವರು ಸಹಜವಾಗಿ, ಸಂದರ್ಭ ಗಳಿಗೆ ಪ್ರತಿಕ್ರಿಯಿಸಿದ್ದರು. ಆಗೆಲ್ಲಾ ಅವರ ನಡೆ ಮಾದರಿಯಾಗಿತ್ತು. ದೇವಾಲಯದ ಒಳಗಡೆ ನಡೆಯುತ್ತಿರುವುದೇನು ಎಂದು ಕಿಟಕಿಯಿಂದ ಇಣುಕಿ ನೋಡುತ್ತಿದ್ದ ದಲಿತ ಸಹಜೀವಿಗಳನ್ನು, ʼಒಳಗೆ ಬನ್ನಿʼ ಎಂದು ಕರೆದುಕೊಂಡು ಹೋಗಿದ್ದರು ತಿಮ್ಮಪ್ಪ. ಅತ್ತ ಅದೇ ತಿಮ್ಮಪ್ಪನವರನ್ನು, ಬ್ರಾಹ್ಮಣರ ಮನೆಯಲ್ಲಿ ಆಡುವ ಹುಡುಗ ಏಕವಚನದಿಂದ ಮಾತನಾಡಿಸುತ್ತಿದ್ದ. “ಏ ಹುಡುಗ, ನಿಮ್ಮಪ್ಪನಿಗೆ ನನಗೆ ಹೆಚ್ಚು ವಯಸ್ಸಾಗಿದೆ ಕಣೋ” ಎಂದು ಹೇಳಿ ಮನೆಯತ್ತ ನಡೆಯುತ್ತಾರೆ.

ಹಲವು ವರ್ಷಗಳ ಕಾಲ ಗೇಣಿದಾರರಾಗಿದ್ದ ತಿಮ್ಮಪ್ಪ ಮಾಲೀಕರಾಗಲು ಜಮೀನು ಮಾಲೀಕರ ಜೊತೆ ಇದ್ದ ಬಾಂಧವ್ಯ ನೆರವಾಗುತ್ತದೆ. ಅವರ ನಂಬಿಕೆಗೆ ತಕ್ಕಂತೆ ನಡೆದುಕೊಂಡು, ಕೊನೆಗೆ ತಾವೇ ಉಳುಮೆ ಮಾಡುತ್ತಿದ್ದ ಜಮೀನು ಪಡೆಯುತ್ತಾರೆ. ಆದರೆ ಇದು ಎಲ್ಲಾ ಸಂದರ್ಭಗಳಲ್ಲೂ, ಎಲ್ಲ ಗೇಣಿದಾರರಿಗೂ ಅನುಕೂಲಕರವಾದ ಹಾದಿಯೇನಲ್ಲ. ತಿಮ್ಮಪ್ಪನವರಿಗೆ ಅದು ಸಾಧ್ಯವಾಗಿದೆ. ಮುಂದೆ ಮಗ ಗ್ರಾಮ ಪಂಚಾಯಿತಿ ಅಧ್ಯಕ್ಷರಾದಾಗ ʼದಲಿತರಿಗೆ ಭೂಮಿ ದೊರಕುವ ಹಾಗೆ ಮಾಡುʼ ಎಂಬ ಸಲಹೆ ನೀಡುತ್ತಾರೆ.

ಮಡೆನೂರು ಡ್ಯಾಂ ಕಟ್ಟುವ ಕಾಲಕ್ಕೆ ತಿಮ್ಮಪ್ಪನವರು ತಮ್ಮ ತಾತನ ಹೆಗಲ ಮೇಲೆ ಕುಳಿತು ಕಾಮಗಾರಿ ನೋಡಿದ್ದರು. ಮುಂದೆ, ಸತ್ಯನಾರಾಯಣ ಅಪ್ಪನನ್ನು ತಬ್ಬಿಕೊಂಡು ಮೊದಲಬಾರಿಗೆ ಲಾಂಚ್‌ ನಲ್ಲಿ ಹಿನ್ನೀರು ದಾಟಿದ್ದರು. ಹೀಗೆ ಕತೆ ನದಿಯ ನೀರಂತೆ ತಲೆಮಾರುಗಳಿಗೆ ತಲುಪುತ್ತಿದೆ. ಆ ಕಾರಣಕ್ಕೆ ನೆನಪುಗಳನ್ನು ದಾಖಲಿಸುವ ಇಲ್ಲಿಯ ಬರಹಗಳು ಆಪ್ತವಾಗಿದೆ. ಮೇಲಾಗಿ, ದೀರ್ಘ ಬದುಕಿನ ಏಳು-ಬೀಳುಗಳನ್ನು ಕಂಡಿರುವ ತಿಮ್ಮಪ್ಪನಿಗೆ ಮಗನಾಗಿ ಸತ್ಯನಾರಾಯಣ ಹೇಳಬೇಕೆಂದಿರುವ ಹಲವು ವಿಚಾರಗಳಿರುತ್ತವೆ. ಅವನ್ನೆಲ್ಲಾ ಎದುರಾಬದುರು ಕುಳಿತು ಹೇಳಲಾಗದಿರಬಹುದು. ಆ ಕಾರಣಕ್ಕೆ ಲೇಖಕ ಈ ಕೃತಿಯ ಮೊರೆ ಹೋಗಿದ್ದಾರೆ ಎನಿಸುತ್ತದೆ.

ಬರವಣಿಗೆ ಹಿನ್ನೆಲೆ ಇಲ್ಲದ ಯಾರಿಗಾದರೂ ನಿಮ್ಮ ನೆನಪುಗಳನ್ನು ಬರೆಯಿರಿ ಎಂದರೆ ಸಹಜವಾಗಿ ಬರುವ ಉತ್ತರ, ʼನನ್ನದೇನಿದೆ..ಬರೆಯೋಕೆʼ. ಸಾಮಾನ್ಯ ಜನರು ಯೋಚಿಸುವುದೇ ಹಾಗೇ. ನೆನಪುಗಳನ್ನು ದಾಖಲಿಸಲು ಹಿಂಜರಿಯುತ್ತಾರೆ. ʼಅಂತ ದೊಡ್ಡ ಸಂಗತಿ ಏನಿಲ್ಲ. ನಮ್ಮದೆಲ್ಲಾ ಯಾರು ಕೇಳ್ತಾರೆ..ಓದ್ತಾರೆʼ ಎಂದೇ ಸಾಗಹಾಕುತ್ತಾರೆ.

ಆದರೆ ಅತ್ಯಗತ್ಯವಾಗಿ ದಾಖಲಾಗಬೇಕಾಗಿರುವುದ ಶ್ರೀಸಾಮಾನ್ಯರ ಬದುಕು, ಬವಣೆ. ಅವರು ಬದುಕನ್ನು ನೋಡುವ ಕ್ರಮ, ಸುತ್ತಲ ಬೆಳವಣಿಗೆಗಳನ್ನು ಗ್ರಹಿಸುವ ಪರಿಯನ್ನು ಬೇರೆಯವರೂ ತಿಳಿಯಬೇಕು. ಸಹಜ ಬದುಕಿನ ನಿತ್ಯ ಸತ್ಯಗಳಿಂದಲೇ ಅವರು ಮಹತ್ವವಾದುದನ್ನು ಕಲಿತು, ರೂಢಿಸಿಕೊಂಡು, ತನ್ನ ನಂತರದ ಜನರಿಗೆ ಹೇಳಬೇಕಾದ ಎಷ್ಟೋ ಸಂಗತಿಗಳನ್ನು ಬಿಟ್ಟು ಹೋಗಿರುತ್ತಾರೆ.

ತುಮರಿ ಸುತ್ತಮುತ್ತಲಿನ ಜನ ಯಾರೇ, ಎಲ್ಲಿಯೇ ಭೇಟಿಯಾಗಲಿ, ಮುಳುಗಡೆ, ಲಾಂಚ್‌, ಹಿನ್ನೀರು ಮತ್ತು ಇವೆಲ್ಲಾ ತಂದೊಡ್ಡಿರುವ ಸಮಸ್ಯೆಗಳ ಚರ್ಚೆಯಾಗದೆ ಮಾತು ಮುಗಿಯುವುದಿಲ್ಲ. ಇನ್ನು ಅಲ್ಲಿನವರ ಬದುಕನ್ನು ಬರೆಯಲು ಹೊರಟರೆ ಆ ಸಂಗತಿಗಳನ್ನು ಈ ಜ್ವಲಂತ ವಿಚಾರಗಳನ್ನು ಬಿಟ್ಟು ಬೇರೆ ಏನನ್ನು ತಾನೆ ಹೇಳುವುದು? ಸ್ವಾತಂತ್ರ‍್ಯಕ್ಕೆ ಮೊದಲೇ ಇಲ್ಲಿರುವ ಜನ ಮಡೆನೂರು ಅಣೆಕಟ್ಟಿಗಾಗಿ ಕಷ್ಟ ಅನುಭವಿಸಿದವರು. ಆಗ ೭೦ ಹಳ್ಳಿಗಳಲ್ಲಿದ್ದ ಜನ ಊರು ಬಿಡಬೇಕಾಯುತು. ನಂತರ ಬಂದ ಲಿಂಗನಮಕ್ಕಿ ಸೇತುವೆ ಕಾರಣ ಅದೇ ಪ್ರದೇಶದ ಒಟ್ಟು ೧೫೨ ಹಳ್ಳಿಗಳ ಜನ ಬೇರೆ ಕಡೆ ಹೊರಡಬೇಕಾಯ್ತು. ಇಲ್ಲೇ ಇದ್ದವರು ದ್ವೀಪವಾಸಿಗಳಾದರು.

ಅದರಾಚೆಗೆ ಓದುಗರನ್ನು ಹಿಡಿದು ನಿಲ್ಲಿಸುವ ಅನೇಕ ಸಂದರ್ಭಗಳು ಇಲ್ಲಿವೆ. ನಾಲ್ಕನೇ ಕ್ಲಾಸ್ ವರೆಗೆ ಓದಿದ್ದ ಅಪ್ಪ ವಿದ್ಯಾಭ್ಯಾಸದ ಅಗತ್ಯವನ್ನು ಚೆನ್ನಾಗಿ ಅರಿತಿದ್ದರು. ಜೊತೆಗೆ ಎಂತಹ ವಿದ್ಯಾಭ್ಯಾಸ ಬೇಕು ಎಂಬುದನ್ನೂ. ತಮ್ಮ ಆರ್ಥಿಕ ಸ್ಥಿತಿಗತಿಗಳ ಮಿತಿಯೊಳಗೇ ಮಕ್ಕಳನ್ನು ಓದಿಸಿದರು. ಅವರು ಸೂಕ್ಷ್ಮ ಸಂದರ್ಭಗಳನ್ನು ಎದುರಿಸುವ ಪರಿ ವಿಶೇಷ. ಮಕ್ಕಳು ಶಾಲೆಗೆ ಮೀನುಸಾರು ತಂದಿದ್ದರು ಎಂಬ ಕಾರಣಕ್ಕೆ ದಂಡಿಸಿದ್ದ ಶಿಕ್ಷಕರ ಅಜ್ಞಾನ ಕಂಡು ಕೋಪಗೊಂಡರು. ಅದೇ ಶಾಲೆಯ ಇನ್ನೊಬ್ಬ ಶಿಕ್ಷಕರನ್ನು ಮನೆಗೆ ಕರೆಸಿ ಅದೇ ಮೀನಿನ ಊಟ ಹಾಕಿ, ಹೇಳಬೇಕಾದ್ದನ್ನು ಹೇಳಿ ತಲುಪಿಸಬೇಕಾದವರಿಗೆ ತಲುಪಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ ಮಗ ಫೇಲ್‌ ಆಗಿದ್ದಾಗ ನಡೆದುಕಳ್ಳುವ ರೀತಿ. ಗೆಳೆಯರ ಜೊತೆ ಸೇರಿದಾಗ ಆದ ಅಚಾತುರ್ಯಕ್ಕೆ ಮಗನ ಮೇಲೆ ಆಪಾದನೆ ಬಂದಾಗ ತೆಗೆದುಕೊಂಡ ನಿಲುವು ಎಲ್ಲವೂ ಅಪ್ಪ-ಮಗನ ಸಂಬಂಧ ಸೂಕ್ಷ್ಮಗಳನ್ನು ತೆರೆದಿಡುತ್ತವೆ.

ಲೇಖಕರು ಹೇಳುವ ಹಾಗೆ, ಅಪ್ಪಯ್ಯ ಗಾಂಧಿಯನ್ನಾಗಲಿ, ಅಂಬೇಡ್ಕರ್‌ ನ್ನಾಗಲಿ ಅಥವಾ ಯಾವ ಸಮಾಜ ಸುಧಾರಕರನ್ನೇ ಆಗಲಿ ಓದಿ ತಿಳಿದವರಲ್ಲ. ಆದರೆ ಅವರು ಸಹಜವಾಗಿ, ಸಂದರ್ಭ ಗಳಿಗೆ ಪ್ರತಿಕ್ರಿಯಿಸಿದ್ದರು. ಆಗೆಲ್ಲಾ ಅವರ ನಡೆ ಮಾದರಿಯಾಗಿತ್ತು. ದೇವಾಲಯದ ಒಳಗಡೆ ನಡೆಯುತ್ತಿರುವುದೇನು ಎಂದು ಕಿಟಕಿಯಿಂದ ಇಣುಕಿ ನೋಡುತ್ತಿದ್ದ ದಲಿತ ಸಹಜೀವಿಗಳನ್ನು, ʼಒಳಗೆ ಬನ್ನಿʼ ಎಂದು ಕರೆದುಕೊಂಡು ಹೋಗಿದ್ದರು ತಿಮ್ಮಪ್ಪ. ಅತ್ತ ಅದೇ ತಿಮ್ಮಪ್ಪನವರನ್ನು, ಬ್ರಾಹ್ಮಣರ ಮನೆಯಲ್ಲಿ ಆಡುವ ಹುಡುಗ ಏಕವಚನದಿಂದ ಮಾತನಾಡಿಸುತ್ತಿದ್ದ. “ಏ ಹುಡುಗ, ನಿಮ್ಮಪ್ಪನಿಗೆ ನನಗೆ ಹೆಚ್ಚು ವಯಸ್ಸಾಗಿದೆ ಕಣೋ” ಎಂದು ಹೇಳಿ ಮನೆಯತ್ತ ನಡೆಯುತ್ತಾರೆ.

ಹಲವು ವರ್ಷಗಳ ಕಾಲ ಗೇಣಿದಾರರಾಗಿದ್ದ ತಿಮ್ಮಪ್ಪ ಮಾಲೀಕರಾಗಲು ಜಮೀನು ಮಾಲೀಕರ ಜೊತೆ ಇದ್ದ ಬಾಂಧವ್ಯ ನೆರವಾಗುತ್ತದೆ. ಅವರ ನಂಬಿಕೆಗೆ ತಕ್ಕಂತೆ ನಡೆದುಕೊಂಡು, ಕೊನೆಗೆ ತಾವೇ ಉಳುಮೆ ಮಾಡುತ್ತಿದ್ದ ಜಮೀನು ಪಡೆಯುತ್ತಾರೆ. ಆದರೆ ಇದು ಎಲ್ಲಾ ಸಂದರ್ಭಗಳಲ್ಲೂ, ಎಲ್ಲ ಗೇಣಿದಾರರಿಗೂ ಅನುಕೂಲಕರವಾದ ಹಾದಿಯೇನಲ್ಲ. ತಿಮ್ಮಪ್ಪನವರಿಗೆ ಅದು ಸಾಧ್ಯವಾಗಿದೆ. ಮುಂದೆ ಮಗ ಗ್ರಾಮ ಪಂಚಾಯಿತಿ ಅಧ್ಯಕ್ಷರಾದಾಗ ʼದಲಿತರಿಗೆ ಭೂಮಿ ದೊರಕುವ ಹಾಗೆ ಮಾಡುʼ ಎಂಬ ಸಲಹೆ ನೀಡುತ್ತಾರೆ.

ಮಡೆನೂರು ಡ್ಯಾಂ ಕಟ್ಟುವ ಕಾಲಕ್ಕೆ ತಿಮ್ಮಪ್ಪನವರು ತಮ್ಮ ತಾತನ ಹೆಗಲ ಮೇಲೆ ಕುಳಿತು ಕಾಮಗಾರಿ ನೋಡಿದ್ದರು. ಮುಂದೆ, ಸತ್ಯನಾರಾಯಣ ಅಪ್ಪನನ್ನು ತಬ್ಬಿಕೊಂಡು ಮೊದಲಬಾರಿಗೆ ಲಾಂಚ್‌ ನಲ್ಲಿ ಹಿನ್ನೀರು ದಾಟಿದ್ದರು. ಹೀಗೆ ಕತೆ ನದಿಯ ನೀರಂತೆ ತಲೆಮಾರುಗಳಿಗೆ ತಲುಪುತ್ತಿದೆ. ಆ ಕಾರಣಕ್ಕೆ ನೆನಪುಗಳನ್ನು ದಾಖಲಿಸುವ ಇಲ್ಲಿಯ ಬರಹಗಳು ಆಪ್ತವಾಗಿದೆ. ಮೇಲಾಗಿ, ದೀರ್ಘ ಬದುಕಿನ ಏಳು-ಬೀಳುಗಳನ್ನು ಕಂಡಿರುವ ತಿಮ್ಮಪ್ಪನಿಗೆ ಮಗನಾಗಿ ಸತ್ಯನಾರಾಯಣ ಹೇಳಬೇಕೆಂದಿರುವ ಹಲವು ವಿಚಾರಗಳಿರುತ್ತವೆ. ಅವನ್ನೆಲ್ಲಾ ಎದುರಾಬದುರು ಕುಳಿತು ಹೇಳಲಾಗದಿರಬಹುದು. ಆ ಕಾರಣಕ್ಕೆ ಲೇಖಕ ಈ ಕೃತಿಯ ಮೊರೆ ಹೋಗಿದ್ದಾರೆ ಎನಿಸುತ್ತದೆ.

ಬರವಣಿಗೆ ಹಿನ್ನೆಲೆ ಇಲ್ಲದ ಯಾರಿಗಾದರೂ ನಿಮ್ಮ ನೆನಪುಗಳನ್ನು ಬರೆಯಿರಿ ಎಂದರೆ ಸಹಜವಾಗಿ ಬರುವ ಉತ್ತರ, ʼನನ್ನದೇನಿದೆ..ಬರೆಯೋಕೆʼ. ಸಾಮಾನ್ಯ ಜನರು ಯೋಚಿಸುವುದೇ ಹಾಗೇ. ನೆನಪುಗಳನ್ನು ದಾಖಲಿಸಲು ಹಿಂಜರಿಯುತ್ತಾರೆ. ʼಅಂತ ದೊಡ್ಡ ಸಂಗತಿ ಏನಿಲ್ಲ. ನಮ್ಮದೆಲ್ಲಾ ಯಾರು ಕೇಳ್ತಾರೆ..ಓದ್ತಾರೆʼ ಎಂದೇ ಸಾಗಹಾಕುತ್ತಾರೆ.

ಆದರೆ ಅತ್ಯಗತ್ಯವಾಗಿ ದಾಖಲಾಗಬೇಕಾಗಿರುವುದ ಶ್ರೀಸಾಮಾನ್ಯರ ಬದುಕು, ಬವಣೆ. ಅವರು ಬದುಕನ್ನು ನೋಡುವ ಕ್ರಮ, ಸುತ್ತಲ ಬೆಳವಣಿಗೆಗಳನ್ನು ಗ್ರಹಿಸುವ ಪರಿಯನ್ನು ಬೇರೆಯವರೂ ತಿಳಿಯಬೇಕು. ಸಹಜ ಬದುಕಿನ ನಿತ್ಯ ಸತ್ಯಗಳಿಂದಲೇ ಅವರು ಮಹತ್ವವಾದುದನ್ನು ಕಲಿತು, ರೂಢಿಸಿಕೊಂಡು, ತನ್ನ ನಂತರದ ಜನರಿಗೆ ಹೇಳಬೇಕಾದ ಎಷ್ಟೋ ಸಂಗತಿಗಳನ್ನು ಬಿಟ್ಟು ಹೋಗಿರುತ್ತಾರೆ.

ಲೇಖಕರು ತಮ್ಮ ಮಾತುಗಳಲ್ಲಿ ಹೇಳಿರುವಂತೆ, ಅವರ ಅಪ್ಪಯ್ಯ ಆಗಾಗ “ನನ್ನ ಜೀವನ ಚರಿತ್ರೆ ಬರೆಯಬೇಕು. ನಾನು ಬರೆಯಲು ಆಗದೇ ಇದ್ದರೆ, ನನ್ನ ಮಗ ಬರೆಯುತ್ತಾನೆ” ಎನ್ನುತ್ತಿದ್ದರಂತೆ. ಈಗ ವಿಶ್ವವಿದ್ಯಾನಿಲಯದಲ್ಲಿ ಓದಿ, ಕಾಲೇಜಿನಲ್ಲಿ ಪಾಠ ಮಾಡಿ, ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷನಾಗಿ ಐದು ವರ್ಷ ಕೆಲಸ ಮಾಡಿದ ಅನುಭವ ಇರುವ ಮಗ ಬರೆದಿದ್ದಾರೆ. ಇದನ್ನೇ, ಅವರ ಅಪ್ಪ ಬಹುಶಹ ಭಿನ್ನವಾಗಿ ಬರೆಯುತ್ತಿದ್ದರು. ಅಷ್ಟೇ ಅಲ್ಲ, ತಿಮ್ಮಪ್ಪನವರ ಮಗನ ಬದಲು, ಮಗಳು ಬರೆದಿದ್ದರೆ ಬರವಣಿಗೆ ಬೇರೆಯೇ ಆಗಿರುತ್ತಿತ್ತಲ್ಲವೆ?

ಕೃತಿ: ಅಪ್ಪಯ್ಯ
(ಅಪ್ಪನ ಬಗ್ಗೆ ಮಗನ ಬರಹಗಳು)
ಲೇಖಕ: ಜಿ.ಟಿ. ಸತ್ಯನಾರಾಯಣ, ಕರೂರು
ಲೇಖಕರ ಮೊಬೈಲ್:‌ 94480-18212
ಪ್ರಕಾಶನ: ಅಂಬಾರಿ ಪ್ರಕಾಶನ, ಮೈಸೂರು.
ಬೆಲೆ: ೨೧೦ ರೂ.

(ಸಾಹಿತ್ಯ, ಸಂಗೀತ, ಸಿನಿಮಾ, ನಾಟಕ, ಜನಜೀವನವೂ ಸೇರಿದಂತೆ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ರೂಪದಲ್ಲಿ ಬೇಕಾದರೂ ಬರೆದು dharaneeshbn@gamil.comಗೆ ಕಳುಹಿಸಿ. ಜೊತೆಗೆ ಪೂರಕವಾದ ಫೋಟೋಗಳನ್ನು ಕಳುಹಿಸಿ. ಪರಿಶೀಲಿಸಿ ಪ್ರಕಟಿಸಲಾಗುವುದು. ಬೂಕನಕೆರೆ ಡೈರಿ ಕಟ್ಟುವುದರಲ್ಲಿ ನಿಮ್ಮ ಕೈ ಕೂಡ ಇರಲಿ)

Recent Article

Comments

0 Comments

Submit a Comment

Your email address will not be published. Required fields are marked *

Related Article

No Results Found

The page you requested could not be found. Try refining your search, or use the navigation above to locate the post.

Instagram
Instagram