ಈ ವರ್ಷ ಐಎಎಸ್ ಅಧಿಕಾರಿಗಳಾದ ಜಯವಿಭವ ಸ್ವಾಮಿ ಮಾರ್ಚ್ 31 ರಂದು, ಎಸ್.ಆರ್. ಉಮಾಶಂಕರ್ ಏಪ್ರಿಲ್ 30 ರಂದು, ಎನ್. ಜಯರಾಂ ಮೇ 31ರಂದು, ಅತಿಲ್‌ಕುಮಾರ್ ತಿವಾರಿ, ಜಿ. ಸತ್ಯವತಿ, ಅಜಯ್ ಸೇರ್ ಜೂನ್ 30 ರಂದು ಹಾಗೂ ನಿಲಯ ಮಿತಾಶ್ ಡಿಸಂಬರ್ 31 ರಂದು ನಿವೃತ್ತಿಯಾಗಲಿದ್ದಾರೆ.
ಈಗಾಗಲೇ ರಾಜ್ಯ ಸರ್ಕಾರದ ಸಹಾಯಕ ಮುಖ್ಯ ಕಾರ್ಯದರ್ಶಿ ಮತ್ತು ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಲ್.ಕೆ. ಅತಿಕ್ ಜನವರಿ 31ರಂದು ನಿವೃತ್ತಿಯಾಗಿದ್ದರು. ಅವರನ್ನು ರಾಜ್ಯ ಸರ್ಕಾರ ಮರು ನೇಮಕ ಮಾಡಿ ಸೇವೆಯಲ್ಲಿ ಮುಂದುವರೆಸಿದೆ.
ಇಬ್ಬರು ಐಪಿಎಸ್ ಗಳೂ ನಿವೃತ್ತಿ
ಈ ವರ್ಷ ಐಪಿಎಸ್ ಅಧಿಕಾರಿಗಳಾದ ಮಾಲಿನಿ ಕೃಷ್ಣಮೂರ್ತಿ ಜುಲೈ 31 ರಂದು ನಿವೃತ್ತಿಯಾಗಲಿದ್ದಾರೆ. DGಯಾಗಿರುವ ಮಾಲಿನಿ ಕೃಷ್ಣಮೂರ್ತಿ ಅವರು ನಿವೃತ್ತರಾಗುವುದರಿಂದ ಅವರ ಸ್ಥಾನಕ್ಕೆ ಸದ್ಯ ಬೆಂಗಳೂರು ಪೊಲೀಸ್ ಆಯುಕ್ತರಾಗಿರುವ ಬಿ ದಯಾನಂದ್ ಬರಬಹುದು. ಹಿಂದೆ ಕಮಲ್ ಪಂತ್ DG ಆಗಿ ಭಡ್ತಿ ಪಡೆದ ನಂತರವೂ ADGP ಪೋಸ್ಟ್ ಆದ ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆಯಲ್ಲೇ ಮುಂದುವರೆದಿದ್ದರು. ಅದೇ ರೀತಿ ಬಿ ದಯಾನಂದ್ ಅವರು DG ಆದ ಮೇಲೂ ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆಯಲ್ಲಿ ಮುಂದುವರೆಯಲೂಬಹುದು. ಅಥವಾ ಹೊಸ ಜಾಗಕ್ಕೆ ಹೋಗಬಹುದು. ಇದಲ್ಲದೆ ಇನ್ನೊಬ್ಬ ಹಿರಿಯ ಐಪಿಎಸ್ ಅಧಿಕಾರಿ DIGP ಬಿ.ಎಸ್. ಲೋಕೇಶ್ ಕುಮಾರ್ ಏಪ್ರಿಲ್ 30ರಂದು ನಿವೃತ್ತಿಯಾಗಲಿದ್ದಾರೆ.
0 Comments